ಕನ್ನಡ ನನಗೆ ಕಂಡು ಬಂದದ್ದು ಬಹಳ ತಡವಾಗಿ. ಅದಕ್ಕಿಂತ ಮುಂಚೆ ಈ ಅದ್ಭುತ ಭಾಷೆಯನ್ನು ನಾನು ಕೇವಲ ಕೇಳಿ ಮಾತಾಡಿರಬಹುದು. ಭಾಷೆಯನ್ನು ನೋಡುವುದರಲ್ಲಿ ಮತ್ತು ಬಳಸುವುದರಲ್ಲಿ ವ್ಯತ್ಯಾಸವಿದೆ. ಈ ವ್ಯತ್ಯಾಸ ಸ್ವತಃ ತಾನೇ ಜೀವನದ ಅರ್ಥ. ಅದೇ ರೀತಿಯಲ್ಲಿ, ಈ ಅ೦ತರ ನಮ್ಮ ಬಾಳಾಟದ ಮನಸ್ತಾಪ ಕೂಡ.
ಸಾಮಾನ್ಯವಾಗಿ, ನಾನು ನನ್ನ ಕಲೆಯನ್ನು ಇಂಗ್ಲಿಷ್ನಲ್ಲಿ ಚಿತ್ರಿಸುತ್ತೇನೆ. ಕಲೆಯ ಭಾಷೆಯಲ್ಲಿಯೇ ಪದಗಳ ಕೊರತೆ ಇದ್ದಾಗ, ಇಂಗ್ಲಿಷ್ ಈ ರೀತಿಯ ಅಭಾವಕ್ಕೆ ಹೊಸದಲ್ಲ. ಕಲೆಯನ್ನು ಎಂದಿಗೂ ಶಬ್ದಗಳೊಂದಿಗೆ ವಿವರಿಸಲು ಸಾಧ್ಯವಿಲ್ಲ. ಅದು ನಮ್ಮ ವ್ಯಾಪ್ತಿಯಿಂದ ಹೊರಗಿದೆ. ಆದರೆ ನಮ್ಮ ಅರಿವಿಲ್ಲದೆ, ಕಲೆ ಯಾವಾಗಲೂ ನಮ್ಮಲ್ಲಿ ವಾಸಿಸುತ್ತದೆ.
ನೀವು ಚಿನ್ನವನ್ನು ಹುಡುಕಿದರೆ ಅದನ್ನು ಪಡೆಯದಿರಬಹುದು. ಭಿನ್ನವಾಗಿ, ಕಲೆಯನ್ನು ಹುಡುಕುವ ಅಗತ್ಯವೇ ಇಲ್ಲ.
ನಾನು ಕನ್ನಡ ಭಾಷೆಯನ್ನು ಅನ್ವೇಷಿಸಲು ಬಯಸುತ್ತೇನೆ. ಏಕೆಂದರೆ, ಕನ್ನಡ ಬರೆಯಲು ಕಲಿಯುವುದರಲ್ಲಿ ನಾನು ಸೊಗಸನ್ನು ಕಂಡುಕೊಂಡಿದ್ದೇನೆ. ಈ ಭಾವನೆ, ನಾನು ಇಂಗ್ಲಿಷ್ನಲ್ಲಿಯೂ ಕಾಣುತ್ತೇನೆ. ಇತಿಹಾಸವೇ ಹೇಳಿದಂತೆ, ಕಲೆಗೆ ಯಾವುದೇ ಭಾಷೆ ಇಲ್ಲ. ಆದರೆ ಒಂದು ಭಾಷೆಯಲ್ಲಿ ಕಲೆ ಇರುತ್ತದೆ.
ನಾನು ಕನ್ನಡದ ಕಲೆಯನ್ನು ಮೆಚ್ಚುತ್ತೇನೆ. ಮತ್ತು, ನೋಡುತ್ತೇನೆ.
Nice Shreyas. Keep the good work. ಪ್ರಯತ್ನ ಮುಂದುವರಿಯಲಿ. ಶುಭಾಶಯಗಳು.
LikeLiked by 1 person
ಒಳ್ಳೆಯ ವಿಚಾರ ಮತ್ತು ಪ್ರಯತ್ನ. ಮುಂದುವರೆಸು
LikeLiked by 1 person
ಧನ್ಯವಾದಗಳು. ಖಂಡಿತ.
LikeLike
ಚನ್ನಾಗಿದೆ. ಪ್ರಯತ್ನ ಮುಂದುವರಿಸು. ಬರೆಯತೊಡಗುವ ಮೊದಲು ತುಂಬ ಓದಲೂ ತೊಡಗು. ಕನ್ನಡದ 50 ಕ್ಲಾಸಿಕ್ ಎನ್ನಬಹುದಾದ ಕೃತಿಗಳನ್ನು ಓದಿದರೆ, ಕನ್ನಡದ ಸೊಗಸು ಮತ್ತು ಸ್ವಾರಸ್ಯದ ಕಲ್ಪನೆ ಸಿಕ್ಕೀತು. ಅನುಭವಗಳನ್ನು ಭಾಷೆಯಲ್ಲಿ ಹಿಡಿದಿಡುವ ದಾರಿ ಸಿಕ್ಕೀತು.
ನಿನ್ನ ಕಾಲೇಜಿನ ಓದಿನೊಂದಿಗೆ ಇದನ್ನೂ ಮುಂದುವರಿಸು. ಶುಭವಾಗಲಿ.
LikeLiked by 1 person
ಧನ್ಯವಾದಗಳು ಅಂಕಲ್. ಖಂಡಿತ.
Thank you for the support. Yes, I’ll keep in mind 🙂
LikeLike